ಮಂಗಳವಾರ, ಅಕ್ಟೋಬರ್ 6, 2026
ಸಾಗರ ಬಳಿ ತಪ್ಪಿದ ಭಾರಿ ವಿದ್ಯುತ್ ದುರಂತ: ವಾಯುವ್ಯ ಸಾರಿಗೆ ಬಸ್ ಅಪಘಾತ
ಸಾಗರ: ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಆನಂದಪುರ, ಸಾಗರ ಕಡೆಗೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ (KA 31 F 1705) ರಸ್ತೆಗೆ ಅಡ್ಡಬಂದ ಜಾನುವಾರುಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ನುಗ್ಗಿದ ಘಟನೆ ಸಾಗರದ ಬಳಿ ನಡೆದಿದೆ.
ಸಾಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಜಂಬಗಾರ ಮುಂದಿನ ಇಳಿಜಾರು ಹಾಗೂ ತೀಕ್ಷ್ಣ ತಿರುವಿನ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆ ಪಕ್ಕದಲ್ಲಿದ್ದ ಹಠಾತ್ ದನಗಳು ಅಡ್ಡಬಂದಾಗ, ಅವುಗಳಿಗೆ ಡಿಕ್ಕಿಯಾಗುವುದನ್ನು ತಡೆಯಲು ಚಾಲಕ ತಕ್ಷಣ ಬ್ರೇಕ್ ಹಾಕಿ ಬದಿಗೆರಿಸಿದ್ದಾರೆ. ಇದರಿಂದ ವಾಹನ ನಿಯಂತ್ರಣ ತಪ್ಪಿ ಎಡಭಾಗದ ಚರಂಡಿ ಗುಂಡಿಗೆ ಇಳಿದಿದೆ.
ಚರಂಡಿಗೆ ನುಗ್ಗಿದ ಬಸ್ ರಸ್ತೆ ಪಕ್ಕದಲ್ಲಿದ್ದ ಹೈಟೆನ್ಷನ್ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬದ ಅರ್ತಿಂಗ್ ಕಂಬಿಗೆ ತಗೂಲಿ ನಿಂತಿದೆ. ಬಸ್ ನೇರವಾಗಿ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿಯಾಗಿದ್ದರೆ ಭಾರಿ ಶಾರ್ಟ್ ಸರ್ಕ್ಯೂಟ್ ಅಥವಾ ವಿದ್ಯುತ್ ಪ್ರವಹಿಸಿ ಬಸ್ಸಿಗೆ ಬೆಂಕಿ ಹತ್ತುಕೊಳ್ಳುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಬಸ್ ಕಂಬದ ಪಕ್ಕದಲ್ಲೇ ನಿಂತಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಅಪಘಾತದ ರಭಸಕ್ಕೆ ಬೆಚ್ಚಿಬಿದ್ದ ಪ್ರವಾಸಿಗರಿಗೆ ಚಾಲಕ ಹಾಗೂ ನಿರ್ವಾಹಕರು ಧೈರ್ಯ ತುಂಬಿ, ಯಾರೂ ಗಾಬರಿಯಾಗದಂತೆ ನಿಧಾನವಾಗಿ ಎಲ್ಲರನ್ನೂ ಬಸ್ಸಿನಿಂದ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದ್ದು, ಅವರ ಜಾಣ್ಮೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಾಗರದ ಮೆಸ್ಕಾಂ (ವಿದ್ಯುತ್ ಇಲಾಖೆ) ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸಂಭಾವ್ಯ ಅನಾಹುತವನ್ನು ಸಂಪೂರ್ಣವಾಗಿ ತಪ್ಪಿಸಿದರು. ಜೊತೆಗೆ ಅಗ್ನಿಶಾಮಕ ದಳದ ವಾಹನ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪರಿಶೀಲನೆ ನಡೆಸಿದ್ದಾರೆ.
ರಸ್ತೆಗಳಲ್ಲಿ ಸಂಚರಿಸುವಾಗ ಅನಿರೀಕ್ಷಿತವಾಗಿ ಅಡ್ಡಬರುವ ಜಾನುವಾರುಗಳು ಅಥವಾ ಅಚಾನಕ್ ಎದುರಾಗುವ ಅಡೆತಡೆಗಳು ಇಂತಹ ಹಠಾತ್ ಅಪಘಾತಗಳಿಗೆ ಕಾರಣವಾಗುತ್ತವೆ. ಈ ಘಟನೆಯಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ಹಲವರ ಪ್ರಾಣ ಉಳಿಸಿದೆ. ಆದರೆ, ವಿದ್ಯುತ್ ಕಂಬಗಳ ಸಮೀಪವಿರುವ ಇಳಿಜಾರು ರಸ್ತೆಗಳಲ್ಲಿ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಜಾನುವಾರುಗಳ ಮುಕ್ತ ಸಂಚಾರವನ್ನು ನಿಯಂತ್ರಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಸಾರ್ವಜನಿಕ ಸುರಕ್ಷತೆಗೆ ಎಲ್ಲರೂ ಕೈಜೋಡಿಸಬೇಕಿದೆ.
Tags
# ಅಪಘಾತ ಸುದ್ದಿ
Share This
About Kannada Global
ಅಪಘಾತ ಸುದ್ದಿ
Tags
ಅಪಘಾತ ಸುದ್ದಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ