ಭಾನುವಾರ, ಅಕ್ಟೋಬರ್ 4, 2026
Home
ಜಿಲ್ಲಾ ಸುದ್ದಿ
ಅಂತರರಾಷ್ಟ್ರೀಯ ಯೋಗ ಪಟು, ಗಾಯಕ ಹಾಗೂ ರಂಗಕರ್ಮಿ ಹರ್ಷ ಸಿ.ಎಂ. ಅಕಾಲಿಕ ನಿಧನ: ಕಲಾ ಲೋಕಕ್ಕೆ ತೀವ್ರ ಆಘಾತ
ಅಂತರರಾಷ್ಟ್ರೀಯ ಯೋಗ ಪಟು, ಗಾಯಕ ಹಾಗೂ ರಂಗಕರ್ಮಿ ಹರ್ಷ ಸಿ.ಎಂ. ಅಕಾಲಿಕ ನಿಧನ: ಕಲಾ ಲೋಕಕ್ಕೆ ತೀವ್ರ ಆಘಾತ
ಶಿವಮೊಗ್ಗ: ಅಂತರರಾಷ್ಟ್ರೀಯ ಯೋಗ ಪಟು, ಪ್ರತಿಭಾವಂತ ಗಾಯಕ, ರಂಗಕರ್ಮಿ ಹಾಗೂ ಯುವ ಸ್ನೇಹಜೀವಿ ಹರ್ಷ ಸಿ.ಎಂ. ಅವರು ಇಂದು ಮುಂಜಾನೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಚಾನಕ್ ನಿಧನವು ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ಹಾಗೂ ಕಲಾ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.
ಬಹುಮುಖ ಪ್ರತಿಭೆಯ ಹರ್ಷ:
ಮೂಲತಃ ಬಹುಮುಖ ಪ್ರತಿಭೆಯುಳ್ಳವರಾದ ಹರ್ಷ ಸಿ.ಎಂ. ಅವರು (ಬಿ.ಪಿ.ಇಡಿ., ಎಂ.ಪಿ.ಇಡಿ., ಪಿ.ಜಿ.ಡಿ.ವೈ. - ಯೋಗ ಪದವೀಧರರು) ಈ ಹಿಂದೆ ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಪ್ರವೃತ್ತಿಯಲ್ಲಿ ಹವ್ಯಾಸಿ ರಂಗ ಕಲಾವಿದರಾಗಿದ್ದ ಇವರು, ಜಾನಪದ, ರಂಗಗೀತೆ ಹಾಗೂ ಜಾನಪದ ಗೀತೆಗಳ ಗಾಯಕರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಜೊತೆಗೆ ಯೋಗ ತರಬೇತುದಾರರಾಗಿಯೂ ಅನೇಕರಿಗೆ ಮಾರ್ಗದರ್ಶನ ನೀಡಿದ್ದರು.
ಇವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಿಂದ ನಿರಂಕುಶಮತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಮಂಟೇಸ್ವಾಮಿ ಕಥಾ ಪ್ರಸಂಗ, ಜಂಗಮ, ಗಾಂಧಿ ಕನ್ನಡಕ, ಲಕ್ಷ್ಮಣ ತುಕಾರಾಮ ಗೋಲೆ, ಪೊಲೀಸರಿದ್ದಾರೆ, ಎಚ್ಚರಿಕೆ! ಮುಂತಾದ ಹಲವು ನಾಟಕಗಳಲ್ಲಿ ಇವರು ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ರಂಗಭೂಮಿಯಲ್ಲದೆ ಮಕ್ಕಳ ಬೇಸಿಗೆ ಶಿಬಿರಗಳು, ಬೀದಿ ನಾಟಕಗಳು ಹಾಗೂ ಜಾನಪದ ಗೀತೆ ತರಬೇತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಹ್ಯಾದ್ರಿ ಕಲಾ ತಂಡದ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದರು.
ಇಂದು ಮುಂಜಾನೆ ನಡೆದ ದುರ್ಘಟನೆಯಲ್ಲಿ ಹರ್ಷ ಅವರು ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಕಣ್ಣೀರ ವಿದಾಯ ಕೋರಿದ್ದಾರೆ.
ಸಂಪಾದಕೀಯ ನುಡಿ:
ಒಬ್ಬ ಯುವ ಪ್ರತಿಭೆ, ಸದಾ ನಗುಮುಖದ ಸ್ನೇಹಜೀವಿ ಹಾಗೂ ಕಲಾ ರಂಗದ ಸಕ್ರಿಯ ಒಡನಾಡಿಯಾಗಿದ್ದ ಹರ್ಷ ಅವರ ಅಕಾಲಿಕ ಅಗಲಿಕೆ ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಕನ್ನಡಿಗರಿಗೆ ಮತ್ತು ರಂಗಭೂಮಿ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಯೋಗದ ಮೂಲಕ ದೇಶ-ವಿದೇಶಗಳಲ್ಲಿ ಕೀರ್ತಿ ತಂದವರು, ರಂಗಭೂಮಿ ಹಾಗೂ ಜಾನಪದದ ಉಳಿವಿಗಾಗಿ ಶ್ರಮಿಸಿದ ಯುವಕನ ಬದುಕು ಇಷ್ಟು ಬೇಗ ಅಂತ್ಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಒಡನಾಟ, ಸಾಧನೆ ಹಾಗೂ ನಗು ನಮ್ಮ ಸ್ಮೃತಿಯಲ್ಲಿ ಸದಾ ಹಸಿರಾಗಿರುತ್ತದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗಕ್ಕೆ ಕರುಣಿಸಲಿ ಎಂದು ಕನ್ನಡ ಗ್ಲೋಬಲ್ ನ್ಯೂಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.
Tags
# ಜಿಲ್ಲಾ ಸುದ್ದಿ
Share This
About Kannada Global
ಜಿಲ್ಲಾ ಸುದ್ದಿ
Tags
ಜಿಲ್ಲಾ ಸುದ್ದಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ