ಸೋಲುಂಡ ಪಾಕ್. ಪ್ರಶಸ್ತಿ ಚೆಕ್ ಎಸೆದ ನಾಯಕ ಸಲ್ಮಾನ್ ಅಲಿ ಅಘಾ - Kannada global

Breaking

Add

ಗುರುವಾರ, ಅಕ್ಟೋಬರ್ 2, 2025

ಸೋಲುಂಡ ಪಾಕ್. ಪ್ರಶಸ್ತಿ ಚೆಕ್ ಎಸೆದ ನಾಯಕ ಸಲ್ಮಾನ್ ಅಲಿ ಅಘಾ

ಸೋಲುಂಡ ಪಾಕ್. ಪ್ರಶಸ್ತಿ ಚೆಕ್ ಎಸೆದ ನಾಯಕ ಸಲ್ಮಾನ್ ಅಲಿ ಅಘಾ


          ಏಷ್ಯಾಕಪ್ ಫೈನಲ್ ಪಂದ್ಯವು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದು. ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೂರನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿ ಪಾಕ್ ತಂಡ ಕಣಕ್ಕೆ ಇಳಿದಿತ್ತು , ಆದರೆ ಅವರ ಆಸೆ ನಿರಾಸೆಯಾಗಿದೆ. 

          ಈ ಬಾರಿಯ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 7 ವಿಕೆಟ್ ಗಳನ್ನು ಉರುಳಿಸುವ ಮೂಲಕ ಜಯ ಸಾಧಿಸಿತ್ತು. ನಂತರ ಎರಡನೇಯ ಸುತ್ತಿನಲ್ಲಿ 6 ವಿಕೆಟ್ ಉರುಳಿಸಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿದ್ದರು. ಈಗ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿದೆ.

        ಈ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ACC (ಏಷ್ಯನ್ ಕ್ರಿಕೆಟ್ಕೌನ್ಸಿಲ್ )ಯಿಂದ ಪಡೆದ ಪ್ರಶಸ್ತಿಯನ್ನು ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಹತಾಶೆಯಿಂದ ಎಸೆದರು. ಪಾಕಿಸ್ತಾನ ನಾಯಕನ ಈ ನಡೆಯನ್ನು ಪ್ರೇಕ್ಷಕರು ಅಪಹಾಸ್ಯ ಮಾಡಿದ್ದಾರೆ. ಈಗ ಪಾಕ್ ತಂಡದ ನಾಯಕನ ಹತಾಶೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://chat.whatsapp.com/Dmh7Q37TABoILnW9FCncyo?mode=ems_copy_t


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್