ಸೋಮವಾರ, ಸೆಪ್ಟೆಂಬರ್ 21, 2026
ಶಿವಮೊಗ್ಗ: ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು; ಇಬ್ಬರ ಬಂಧನ
ಶಿವಮೊಗ್ಗ: ಜಿಲ್ಲೆಯಲ್ಲಿ ವನ್ಯಜೀವಿಗಳ ಬೇಟೆ ಮತ್ತು ಅಕ್ರಮ ಮಾಂಸ ಮಾರಾಟ ಪ್ರಕರಣಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಮಾಂಸವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಂಬ್ಳೆಬೈಲು ವಲಯದ ಯರಗನಾಳು ಗ್ರಾಮದ ಸೇತು ಬಿನ್ ಮಾಣಿಕ್ಯ ಹಾಗೂ ದರ್ಶನ್ ಬಿನ್ ಸೇತು ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಕುಸ್ಕೂರ್ ಗ್ರಾಮದ ಮತ್ತೊಬ್ಬ ಆರೋಪಿ ಲೋಕೇಶ್ ನಾಯಕ ಬಿನ್ ಕಾಳನಾಯಕ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಇಲಾಖೆಯು ತನಿಖೆಯನ್ನುು ಚುರುಕುಗೊಳಿಸಿದೆ.
ಕಾರ್ಯಾಚರಣೆಯ ವಿವರ:
ಭದ್ರಾವತಿ ವಿಭಾಗದ ಉಪ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಶ್ರೀಧರ್ ತೆಂಗಿನಮನೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಉಂಬ್ಳೆಬೈಲು ವಲಯದ RFO ಪ್ರದೀಪ್ M.S ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಕಾಸಿಮ್ ಸಾಬ್, ಬೀಟ್ ಫಾರೆಸ್ಟರ್ ಚಂದ್ರಶೇಖರ್, ಜಬಿವುಲ್ಲಾ, ಸಲೀಮ್ ಎಂ., ಹಾಗೂ ಇಪ್ತಿಕರ್ ಅಹಮದ್ ಹಾಗೂ ವಾಚರ್ ಗಳಾದ ಬಾಣೇಶ್, ಸಂತೋಷ್, ವೆಂಕಟೇಶ್, ಜಗನ್ನಾಥ್ ಮತ್ತು ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಂಪಾದಕೀಯ ನುಡಿ:
ವನ್ಯಜೀವಿಗಳು ನಮ್ಮ ಪರಿಸರ ಮತ್ತು ಜೀವವೈವಿಧ್ಯದ ಅವಿಭಾಜ್ಯ ಅಂಗವಾಗಿವೆ. ಇಂತಹ ಮೂಕ ಪ್ರಾಣಿಗಳ ಅಕ್ರಮ ಬೇಟೆ ಮತ್ತು ವಾಣಿಜ್ಯ ಉದ್ದೇಶದ ಮಾರಾಟವು ಕಾನೂನುಬಾಹಿರ ಮಾತ್ರವಲ್ಲದೆ, ನೈಸರ್ಗಿಕ ಸಮತೋಲನಕ್ಕೆ ಎಸಗುವ ದೊಡ್ಡದ್ರೋಹವಾಗಿದೆ. ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತೋರಿಸಿರುವ ಈ ತತ್ಪರತೆ ಮತ್ತು ಕಾರ್ಯಕ್ಷಮತೆ ಶ್ಲಾಘನೀಯ. ಸಾರ್ವಜನಿಕರು ಇಂತಹ ವನ್ಯಜೀವಿ ಅಪರಾಧಗಳ ಬಗ್ಗೆ ಎಚ್ಚೆತ್ತುಕೊಂಡು, ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದಾಗ ಮಾತ್ರ ವನ್ಯಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ರೀತ್ಯ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಇಂತಹ ಕೃತ್ಯಗಳಿಗೆ ಮುಂದಾಗುವವರಿಗೆ ಸ್ಪಷ್ಟ ಸಂದೇಶ ನೀಡಬೇಕಿದೆ.
Tags
# ಜಿಲ್ಲಾ ಸುದ್ದಿ
Share This
About Kannada Global
ಜಿಲ್ಲಾ ಸುದ್ದಿ
Tags
ಜಿಲ್ಲಾ ಸುದ್ದಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ