ಶನಿವಾರ, ಸೆಪ್ಟೆಂಬರ್ 12, 2026
ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕ ತಿದ್ದುಪಡಿ ಅಕ್ರಮ: ಫೇಲ್ ಆಗಿದ್ದ ವಿದ್ಯಾರ್ಥಿ ಪಾಸ್!
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕಗಳನ್ನು ಅನಧಿಕೃತವಾಗಿ ತಿದ್ದುಪಡಿ ಮಾಡಿ, ಅನುತೀರ್ಣಗೊಂಡಿದ್ದ ವಿದ್ಯಾರ್ಥಿಯೊಬ್ಬನನ್ನು ಪಾಸು ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಯುಯುಸಿಎಂಎಸ್ (UUCMS) ವಿಭಾಗದ ನಿರ್ವಾಹಕಿ (ಅಡ್ಮಿನ್) ಅನುಷಾ ಹಾಗೂ ವಿದ್ಯಾರ್ಥಿ ವರ್ಷಿತ್ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಖಾಸಗಿ ಕಾಲೇಜೊಂದರಲ್ಲಿ ಬಿಎಸ್ಸಿ ಐದನೇ ಸೆಮಿಸ್ಟರ್ ಅಭ್ಯಾಸ ಮಾಡುತ್ತಿರುವ ವರ್ಷಿತ್ ಎಂಬ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು (ಫೇಲ್ ಆಗಿದ್ದರು). ಈ ವಿಷಯಗಳ ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿ ಯಾವುದೇ ರೀತಿಯ ಅಧಿಕೃತ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಆದರೆ, ಇತ್ತೀಚೆಗೆ ವಿಶ್ವವಿದ್ಯಾಲಯದ ಅಧಿಕೃತ ಪೋರ್ಟಲ್ನಲ್ಲಿ ಪ್ರಕಟಗೊಂಡ ಫಲಿತಾಂಶದಲ್ಲಿ ಯಾವುದೇ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯದೆಯೇ ಅವರು ತೇರ್ಗಡೆಯಾಗಿದ್ದಾರೆ (ಪಾಸ್) ಎಂದು ತೋರಿಸಲಾಗಿತ್ತು.
ಇದಲ್ಲದೆ, ಏಪ್ರಿಲ್ 20, 2026ರಂದು ಪ್ರಕಟವಾಗಿದ್ದ ಯುಯುಸಿಎಂಎಸ್ ಫಲಿತಾಂಶದಲ್ಲಿ ವಿದ್ಯಾರ್ಥಿ ವರ್ಷಿತ್ ಫೇಲ್ ಆಗಿದ್ದರು. ಆದರೆ ಜೂನ್ 22ರಂದು ಅದೇ ಪೋರ್ಟಲ್ನಲ್ಲಿ ಯಾವುದೇ ಮರುಮೌಲ್ಯಮಾಪನವಿಲ್ಲದೆ ಅವರನ್ನು ಪಾಸು ಎಂದು ಬದಲಾಯಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಲಂಚದ ಆರೋಪ ಮತ್ತು ಮೇಲ್ನೋಟಕ್ಕೆ ಸಾಕ್ಷ್ಯ:
ಅನುತೀರ್ಣಗೊಂಡಿದ್ದ ವಿಷಯಗಳಲ್ಲಿ ಅಂಕಗಳನ್ನು ಬದಲಾಯಿಸಿ ಪಾಸು ಮಾಡಿಕೊಡಲು ಅಡ್ಮಿನ್ ಅನುಷಾ ಅವರು ವಿದ್ಯಾರ್ಥಿಯಿಂದ ಪ್ರತಿ ವಿಷಯಕ್ಕೆ 10,000 ರೂ. ನಂತೆ ಒಟ್ಟು ಐದು ವಿಷಯಗಳಿಗೆ 50,000 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕಿ ಟೀನಾ ಕುಮಾರಿ ಅವರು ಮೌಲ್ಯಮಾಪನ ಕುಲಸಚಿವರಿಗೆ ಅಧಿಕೃತ ದೂರು ನೀಡಿದ್ದರು.
ಈ ದೂರಿನ ಮೇರೆಗೆ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಅವರು ಪರಿಶೀಲನೆ ನಡೆಸಿದಾಗ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು.
ಅಧಿಕಾರ ದುರುಪಯೋಗ:
ಯಾವುದೇ ಅನುಮತಿ ಪಡೆಯದೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರದೆ, ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಕೀ ಮತ್ತು ಒನ್ ಟೈಮ್ ಪಾಸ್ವರ್ಡ್ (OTP) ಬಳಸಿ ಅಂಕಗಳನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂದು ಪ್ರೊ. ಆರ್. ತಿಮ್ಮರಾಯಪ್ಪ ಅವರು ತಮ್ಮ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
Tags
# ಶಿವಮೊಗ್ಗ
Share This
About Kannada Global
ಶಿವಮೊಗ್ಗ
Tags
ಶಿವಮೊಗ್ಗ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Advertisement
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ
📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿಕನ್ನಡ ಗ್ಲೋಬಲ್ ನ್ಯೂಸ್
Author Details
"ಚರಣ್ - ಸಂಸ್ಥಾಪಕರು, ಕನ್ನಡ ಗ್ಲೋಬಲ್. ನಿಖರ ಸುದ್ದಿ, ನೇರ ಮಾತು ಹಾಗೂ ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳ ವಿಶ್ಲೇಷಣೆ. ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮದ ಪಥದಲ್ಲಿ ನನ್ನ ಪಯಣ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ