ಸಾಗರ: ಸಾಕು ನಾಯಿ ಜೊತೆ ಜಗಳವಾಡಿದ್ದಕ್ಕೆ ಬೀದಿ ನಾಯಿಗೆ ಗುಂಡಿಕ್ಕಿ ಕೊಂದ ವ್ಯಕ್ತಿ ಬಂಧನ! - Kannada global

Breaking

Add

ಶನಿವಾರ, ಆಗಸ್ಟ್ 29, 2026

ಸಾಗರ: ಸಾಕು ನಾಯಿ ಜೊತೆ ಜಗಳವಾಡಿದ್ದಕ್ಕೆ ಬೀದಿ ನಾಯಿಗೆ ಗುಂಡಿಕ್ಕಿ ಕೊಂದ ವ್ಯಕ್ತಿ ಬಂಧನ!

 ಸಾಗರ:ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಕು ನಾಯಿಗಳೊಂದಿಗೆ ಕಾದಾಟ ನಡೆಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಅಕ್ರಮ ಬಂದೂಕಿನಿಂದ ಗುಂಡು ಹಾರಿಸಿ ಕ್ರೂರವಾಗಿ ಕೊಂದಿದ್ದಾನೆ.

ಘಟನೆಯ ವಿವರ:

ನಾಡವಳ್ಳಿ ಗ್ರಾಮದ ನಿವಾಸಿ ಬೋರೇಗೌಡ ಎಂಬುವವರು ತಮ್ಮ ದನಗಳನ್ನು ಮೇಯಿಸಲು ಕರೆದೊಯ್ಯುತ್ತಿದ್ದಾಗ, ಕಂದು ಬಣ್ಣದ ಗಂಡು ನಾಯಿಯೊಂದು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿತ್ತು. ಮಾರ್ಗಮಧ್ಯೆ ಲಿಂಗಮೂರ್ತಿ ಎಂಬುವವರ ಮನೆಯ ಹತ್ತಿರ ತಲುಪಿದಾಗ, ಆ ನಾಯಿ ಹಾಗೂ ಲಿಂಗಮೂರ್ತಿ ಅವರ ಮನೆಯ ಸಾಕು ನಾಯಿಗಳ ನಡುವೆ ಕಾದಾಟ (ಜಗಳ) ಏರ್ಪಟ್ಟಿದೆ.

ಇದರಿಂದ ತೀವ್ರ ಕೋಪಗೊಂಡ ಲಿಂಗಮೂರ್ತಿ, ತಕ್ಷಣವೇ ತನ್ನ ಬಳಿ ಇದ್ದ ಅಕ ಬಂದೂಕನ್ನು ಹೊರತೆಗೆದು ಬೀದಿ ನಾಯಿಯ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಾಗಿದ ನಾಯಿಯು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಪೋಲೀಸ್ ಕ್ಯಾರ್ಯಚರಣೆ:

ಅನಧಿಕೃತ ಶಸ್ತ್ರಾಸ್ತ್ರ ಬಳಕೆ ಹಾಗೂ ಮೂಕ ಪ್ರಾಣಿಯ  ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆನಂದಪುರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ (PSI) ಪ್ರವೀಣ್ ಅವರು ಆರೋಪಿ ಲಿಂಗಮೂರ್ತಿ ವಿರುದ್ಧ ಬಿಎನ್‌ಎಸ್‌ (BNS) ಹಾಗೂ ಆಮ್ಸ್ ಆಕ್ಟ್ (ಅಸ್ತ್ರ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಸಂಪಾದಕೀಯ ನುಡಿ :

"ಪ್ರಾಣಿ ಹಿಂಸೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಬಳಕೆ ಸಮಾಜಕ್ಕೆ ಕಂಟಕ"

ನಾಯಿಗಳ ನಡುವಿನ ನೈಸರ್ಗಿಕ ಜಗಳಕ್ಕೆ ಕಟುಕತನದ ಆಕ್ರೋಶ ವ್ಯಕ್ತಪಡಿಸಿ, ಬಂದೂಕಿನಿಂದ ಗುಂಡಿಕ್ಕಿ ಕೊಲ್ಲುವ ಹಂತಕ್ಕೆ ಮಾನವೀಯತೆ ತಲುಪಿರುವುದು ಅತ್ಯಂತ ಶೋಚನೀಯ. ಮೂಕ ಪ್ರಾಣಿಗಳಿಗೆ ಜೀವಿಸುವ ಹಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ.

ಇಲ್ಲಿ ಇನ್ನೊಂದು ಗಂಭೀರ ವಿಷಯವೆಂದರೆ 'ಅಕ್ರಮ ಬಂದೂಕಿನ ಬಳಕೆ'. ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು ಸಮಾಜದ ಶಾಂತಿ ಮತ್ತು ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ. ಇಂದು ಮೂಕ ಪ್ರಾಣಿಯ ಮೇಲೆ ಹರಿದ ಬಂದೂಕು, ನಾಳೆ ಕ್ಷುಲ್ಲಕ ಕಾರಣಕ್ಕೆ ಮನುಷ್ಯರ ಮೇಲೆಯೂ ಪ್ರಯೋಗವಾಗಬಹುದು. ಈ ಹಿನ್ನೆಲೆಯಲ್ಲಿ ಆನಂದಪುರ ಪೊಲೀಸರು ಕೈಗೊಂಡಿರುವ ತಕ್ಷಣದ ಕಾನೂನು ಕ್ರಮ ಅಭಿನಂದನೀಯ. ಇಂತಹ ಅಕ್ರಮ ಆಯುಧಗಳನ್ನು ಹೊಂದಿರುವವರ ವಿರುದ್ಧ ಪೊಲೀಸ್ ಇಲಾಖೆ ಇಡೀ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್