ಈಗಿನ ಜನರೇಷನ್ನು.....
ಈಗಿನ ಜನರೇಷನ್ನು...
ಆಸೆಗಳಿಗಿಂತ ಆಮಿಷಗಳೇ ಹೆಚ್ಚು,
ಜವಾಬ್ದಾರಿಗಳಿಗಿಂತ ಜಾಲತಾಣಗಳೇ ಹೆಚ್ಚು,
ನೀಯತ್ತು ನಂಬಿಕೆಗಳಿಗಿಂತ ನಾಟಕ ನವರಂಗಿಗಳೇ ಹೆಚ್ಚು. ಬಂಧನ, ಬಾಂಧವ್ಯಗಳೆಲ್ಲ ನೀರಮೇಲ ಗುಳ್ಳೆಯಂತೆ, ಯಾವಾಗ ಭೋರ್ಗರೆವ ಮಳೆ ಸುರಿದು ಗುಳ್ಳೆಗಳು ಹುಟ್ಟಿ ತೆಕ್ಕನೆ ಒಡೆಯುವುದೋ ಎಂದು ತಿಳಿಯದೋ ಹಾಗೆಯೇ ಈ ಬಂಧನ ಬಾಂಧವ್ಯಗಳು ಪರಿಚಯದ ಹೊಸತರಲ್ಲಿ ಒಬ್ಬರ ಆಕರ್ಷಣೆಗೊಳಗಾಗಿ ಮಳೆಯಂತೆ ಸುರಿದು ನಂತರ ನೀರಮೇಲ ಗುಳ್ಳೆಯಂತೆ ಆಕರ್ಷಣೆಯೂ ಆಲಸ್ಯವಾಗುವುದು.
ಈಗಿನ ಜನರೇಷನ್ನು, ಒಳ್ಳೆಯ ಸಂಭಂದಕ್ಕೆ ಬೆಲೆ ಕೊಡುವುದಕ್ಕಿಂತ, ಬೆಲೆ ತೆರುವುದೇ ಹೆಚ್ಚಾಗಿದೆ.
ಹೀಗೆಯೇ ನಾ ನೋಡಿದ ಒಂದು ಕಥೆ....
"ಕಾಲೇಜಿನ ಹೊಸತರಲ್ಲಿ ಕಣ್ಣುಗಳು ಗಾಂಧಾರಿಯಂತೆ ಬಟ್ಟೆಕಟ್ಟಿಕೊಂಡಿರುತ್ತವೆ. ಯಾವುದನ್ನು, ಯಾರನ್ನು ಕೂಲಂಕುಷವಾಗಿ ನೋಡದೆ ಆಳವಾಗಿ ನಂಬಿ ಬಿಡುವುದೇ ಹೆಚ್ಚು. ಹಾಗೆಯೇ ಸಮೀಕ್ಷಾ ಕೂಡ ಸಂದೇಶನನ್ನು ತುಂಬಾ ಹಚ್ಚಿಕೊಂಡಿದ್ದಳು, ಅವರ ಗೆಳೆತನ ಮೊದಲೆಲ್ಲಾ ಎಲ್ಲರ ಕಣ್ಣುಕುಕ್ಕುವಂತಿದ್ದು ಅವರಷ್ಟಕ್ಕೆ ಅವರೇ ' Friends Forever ' ಎಂದುಕೊಂಡರು. ಕೆಲವು ದಿನಗಳ ಅವರ ಗೆಳೆತನ ಅವರಿಗೇ ತಿಳಿಯದೆ ಪ್ರೀತಿಯೂ ಆಗಿಹೋಯಿತು. ತಮಗೆ ತಾವೇ ' Worlds Best Couples ' ಎಂದುಕೊಂಡರು. ಅದೇ ಹುಮ್ಮಸ್ಸು ಅವನಲ್ಲಿ ಹೊಸ ಆಸೆಗಳೂ ಚಿಗುರಿತು. ತನ್ನಿನಿಯನ ಆಸೆಗಳಿಗೆ ಅಸ್ತು ಎಂದು ಎಂದು ಆಸೆಗಳೂ ಆಮಿಷವಾಗತೊಡಗಿದವು.
ಆದರೇ, ಎಲ್ಲವೂ ಆರಂಭದಲ್ಲಿ ಇರುವಂತೆಯೇ ಮುಂದುವರೆಯುವುದಲ್ಲವಲ್ಲ. ಸ್ನೇಹಗಳೇ ಕಳಚಿ ಬೀಳುವಾಗ, ಆಮಿಷಕ್ಕೊಳಗಾದ ಪ್ರೀತಿ, ಪ್ರೇಮ ಎಷ್ಟು ದಿನ ಬದುಕಬಲ್ಲವು.
ಹೀಗೆಯೇ, ಸಂದೇಶನೂ ಹೊಸ ಮುಖಗಳಿಗೆ ಆಕರ್ಷಿತನಾಗುತ್ತಾ ಸಮೀಕ್ಷಾಳ ಮೇಲೆ "interest " ಕಳೆದುಕೊಳ್ಳುತ್ತಾ ಬಂದ. ಆದರೇ ಅವನು ಊಸರಬಳ್ಳಿಯಂತೆ ಬಣ್ಣ ಬದಲಾಯಿಸುತ್ತ ಅವಳಲ್ಲಿ ಕಾಮನಬಿಲ್ಲನ್ನೇ ಮೂಡಿಸಿದ್ದ. ಆದರೇ ಸಮೀಕ್ಷಾಳಿಗೆ ಸಂದೇಶನ ಮೇಲೆ ಸಂದೇಹ ಮೂಡಲೇ ಇಲ್ಲ. ಆದರೇ ಎಲ್ಲಾ ನಾಟಕಕ್ಕೂ ತೆರೆ ಎಳೆಯಲೇ ಬೇಕಲ್ಲವೇ ಹಾಗೆಯೇ ಅವನ ಬಣ್ಣ ಕೂಡ ಒಂದು ದಿನ ಕಳಚಿತು.
ಅವನಿಗೇನು ಮನಸ್ಸು ಮಂಗನತೆ ಎಂಬ ಗಾದೆ ಮಾತೆ ಇದೆಯಲ್ಲ, ಯಾವುದೇ ಪಶ್ಚಾತಾಪದ ಪರಿವೇ ಇಲ್ಲದೆ "Move On" ಆದ.
ಆದರೆ ಅವಳ ಗತಿ ಹೆಣ್ಣಾದ ಅವಳೇ ತಗ್ಗಿಬಗ್ಗಿ ನಡೆಯಬೇಕೆಂಬ ದೂಷಣೆಗೆ ಒಳಗಾಗುವವಳು. "ತನ್ನವನ ಮೋಸ ಅರಿಯದೆ ಹೋದ ನಾನು ಇಷ್ಟೊಂದು ಮೂರ್ಖಯೇ", ಎಂದು ಸುನಾಮಿಗೆ ತತ್ತರಿಸಿ ನೆಲಕ್ಕುರುಳಿದ ಮರದಂತೆ ಮೇಲೇರಲು ತುಂಬಾ ಸಮಯವೇ ಹಿಡಿಯಿತು.
ಹೇಗಿದೆಯಲ್ಲವೇ "ಈಗಿನ ಜನರೇಷನ್ನು ", ನಾಲ್ಕು ದಿನದ ನವರಂಗಿ ಬದುಕಿಗೆ ಸ್ನೇಹ, ಪ್ರೀತಿ, ಪ್ರೇಮ ಎಂಬ ಮುಖವಾಡವನಿಟ್ಟು ನಮ್ಮ ಕ್ಷಣಕಾಲದ ಸಂತೋಷಕ್ಕೆ ಮತ್ತೊಬ್ಬರ ಜೀವನದಲ್ಲಿ ಕಪ್ಪು ಮೂಡಿಸಿ ಅವರ ಸಂತೋಷ ಕಿತ್ತುಕೊಳ್ಳುವಂತಹ ಸ್ವಾರ್ಥಿಗಳಾಗಿ ಬಿಡುತ್ತೇವೆ.
ಈಗಿನ ಜನರೇಷನ್ನು, "Private photo share " ಮಾಡಿಕೊಂಡು ಪ್ರೀತಿ ಮಾಡುವವರೇ ಹೊರತು, ನೀಯತ್ತು ನಂಬಿಕೆಗಳನ್ನಲ್ಲಾ,
"Private Part " ಗಳಿಗೇ ಇಲ್ಲದ "Privacy Instagram Password" ಗೆ ಇದೆ.
"Privacy ಎಂದರೆ ಈಗಿನ ಜನರೇಷನ್ನಲ್ಲಿ Instagram, Whatsapp msg ಗಳಿಗೆ ಮಾತ್ರ.
ತಮ್ಮ ತಮ್ಮ Photo ಗಳನ್ನು ಕಳಿಸಿಕೊಳ್ಳುವಷ್ಟು ಮಹತ್ತರದ ಪ್ರೀತಿ ಮಾಡುವವರು Instagram password, mobile ನಲ್ಲಿರುವ msg ಮಾತ್ರ ನೋಡುವಂತಿಲ್ಲ.
ಅದನ್ನು ಕೇಳಿದರೆ ತಕ್ಷಣವೇ "ನನ್ನ ಮೇಲೆ ನಂಬಿಕೆ ಇಲ್ಲವೇ, ನೀನು ಹೀಗೆಲ್ಲ ಯೋಚಿಸುವೆಯಾ ಅದು ನನ್ನ ಬಗ್ಗೆ ಎಂದುಕೊಂಡಿರಲಿಲ್ಲ " ಎಂದು ತಪ್ಪನ್ನು ನಿರಪರಾಧಿಯ ಮೇಲೆ ಹೊರಿಸಿ ಕೈ ತೊಳೆದುಕೊಳ್ಳುತ್ತಾರೆ.
"ಈಗ ಸಮೀಕ್ಷಾಳ ಬದುಕಿನಲ್ಲಿ ಆದಂತೆಯೇ "
---ಎಲ್ಲರನ್ನೂ ನಂಬಬೇಕು, ಆದರೇ ನಾವೇ ಮೋಸ ಹೋಗುವಷ್ಟು ಯಾರನ್ನು ನಂಬಬಾರದು.
--- ಚೈತ್ರ. ಏನ್.❤️🌝
ಸ್ವತಂತ್ರ ಬರಹಗಾರ್ತಿ
ದೊಂಬೇಸರ, ಸಾಗರ
ಸಂಪಾದಕೀಯ ನುಡಿ
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಂಬಂಧಗಳ ತೂಕ
ಇಂದಿನ ವೇಗದ ಬದುಕಿನಲ್ಲಿ ಎಲ್ಲವೂ 'ಇನ್ಸ್ಟಂಟ್' ಆಗಿಬಿಟ್ಟಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯರ ನಡುವಿನ ಸಂಪರ್ಕ ಸುಲಭವಾಗಿದೆಯೇ ಹೊರತು ಸಂಬಂಧಗಳು ಗಟ್ಟಿಯಾಗುತ್ತಿಲ್ಲ. ಬೆರಳ ತುದಿಯ ಜಾಲತಾಣಗಳಲ್ಲಿ ನೂರಾರು ಸ್ನೇಹಿತರಿದ್ದರೂ, ಮನದ ಆಳದ ನೋವನ್ನು ಹಂಚಿಕೊಳ್ಳಲು ಒಬ್ಬರು ಸಿಗುವುದು ಕಷ್ಟವಾಗಿದೆ.
ಪ್ರೀತಿ, ಸ್ನೇಹ ಮತ್ತು ನಂಬಿಕೆ ಎಂಬ ಪದಗಳು ಇಂದಿನ 'ಡಿಜಿಟಲ್' ಯುಗದಲ್ಲಿ ಕೇವಲ ಆಕರ್ಷಣೆಯ ಮುಖವಾಡಗಳಾಗಿ ಬದಲಾಗುತ್ತಿರುವುದು ಆತಂಕದ ಸಂಗತಿ. ಜವಾಬ್ದಾರಿಗಳಿಗಿಂತ ಜಾಲತಾಣಗಳೇ ಮುಖ್ಯವಾದಾಗ, ನೈಜ ಬಾಂಧವ್ಯಗಳು ನೀರ ಮೇಲಿನ ಗುಳ್ಳೆಯಂತೆ ಒಡೆದು ಹೋಗುತ್ತಿವೆ. ಇಂತಹ ಹೊತ್ತಿನಲ್ಲಿ ನಾವು ಕಟ್ಟಿಕೊಳ್ಳುವ ಸಂಬಂಧಗಳು 'ಪಾಸ್‌ವರ್ಡ್'ಗಳ ಮೇಲೆ ನಿಂತಿರಬೇಕೋ ಅಥವಾ ಪರಸ್ಪರ 'ನಂಬಿಕೆ'ಯ ಮೇಲೆ ನಿಂತಿರಬೇಕೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಲೇಖಕಿ ಚೈತ್ರ ಎನ್. ಅವರು ಇಲ್ಲಿ ವ್ಯಕ್ತಪಡಿಸಿರುವ ಆಲೋಚನೆಗಳು ಇಂದಿನ ತಲೆಮಾರಿನ ಬಾಂಧವ್ಯಗಳ ಕಟು ವಾಸ್ತವಕ್ಕೆ ಕನ್ನಡಿ ಹಿಡಿದಿವೆ. ಕೇವಲ ಡಿಜಿಟಲ್ ಆಕರ್ಷಣೆಗಳಿಗೆ ಮರುಳಾಗದೆ, ನಿಜವಾದ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ಗೌರವಿಸುವುದೇ ಇಂದಿನ ತುರ್ತು ಅಗತ್ಯವಾಗಿದೆ. ಕಣ್ಣು ಮುಚ್ಚಿ ನಂಬುವ ಮುನ್ನ ವಿವೇಚನೆ ಇರಲಿ, ನಮ್ಮ ಸಂತೋಷಕ್ಕಾಗಿ ಮತ್ತೊಬ್ಬರ ಬದುಕನ್ನು ಕಪ್ಪಾಗಿಸುವ ಸ್ವಾರ್ಥ ನಮ್ಮದಾಗದಿರಲಿ ಎಂಬುದು ಈ ಲೇಖನದ ಆಶಯ.
— ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್
No comments:
Post a Comment