ತೀರ್ಥಹಳ್ಳಿ: ಕಾರು ಡಿಕ್ಕಿಯಾಗಿ ಆರು ವರ್ಷದ ಬಾಲಕ ಸಾವು - Kannada global

Breaking

Monday, July 20, 2026

ತೀರ್ಥಹಳ್ಳಿ: ಕಾರು ಡಿಕ್ಕಿಯಾಗಿ ಆರು ವರ್ಷದ ಬಾಲಕ ಸಾವು

ಶಿವಮೊಗ್ಗ:ಆಟವಾಡುತ್ತಾ ರಸ್ತೆ ಕಡೆಗೆ ಬಂದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆ ಎಂಬಲ್ಲಿ ಭಾನುವಾರ ನಡೆದಿದೆ.

ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಪಾಲ್ ಸಮೀಪದ ಗುಂಡುಗದ್ದೆಯ ಪ್ರಗತ್ ಎಂಬುವರ 6 ವರ್ಷದ ಪುತ್ರ ಋಷ್ಯ ಮೃತಪಟ್ಟ ಬಾಲಕನಾಗಿದ್ದಾನೆ.

ಘಟನೆಯ ವಿವರ:

ಬಾಲಕನ ಮನೆಯ ಪಕ್ಕದಲ್ಲೇ ಲಾರಿಯೊಂದನ್ನು ನಿಲ್ಲಿಸಲಾಗಿತ್ತು. ಮಗು ಆಟವಾಡುತ್ತಾ ರಸ್ತೆಗೆ ಬಂದಾಗ, ಅಲ್ಲಿ ನಿಂತಿದ್ದ ಲಾರಿಯ ಮರೆಯಿಂದಾಗಿ ರಸ್ತೆಯಲ್ಲಿ ಬರುತ್ತಿದ್ದ ಕಾರು ಚಾಲಕನಿಗೆ ಬಾಲಕ ಕಾಣಿಸಿಲ್ಲ ಎನ್ನಲಾಗಿದೆ. ಈ ವೇಳೆ ವೇಗವಾಗಿ ಬಂದ ಕಾರು ಬಾಲಕನಿಗೆ ನೇರವಾಗಿ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬಸ್ಥರು ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಪಾಸಣೆ ನಡೆಸಿ ಧೃಡಪಡಿಸಿದ್ದಾರೆ.


No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್