ಮೆಸ್ಕಾಂನಿಂದ ರೈತರಿಗೆ ಸಿಹಿಸುದ್ದಿ: ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಪ.ಜಾ/ಪ.ಪಂ) ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಸಲುವಾಗಿ ಶಿವಮೊಗ್ಗ ತಾಲೂಕು ಗ್ರಾಮೀಣ ಮೆಸ್ಕಾಂ ಉಪವಿಭಾಗವು ಎಸ್‌ಸಿಪಿ (SCP) ಮತ್ತು ಟಿಎಸ್‌ಪಿ (TSP) ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದೆ.
ಗ್ರಾಮೀಣ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಅಬ್ಬಲಗೆರೆ, ಪಿಳ್ಳಂಗಿರಿ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು (ಘಟಕ-2) ಶಾಖೆಗಳ ವ್ಯಾಪ್ತಿಗೆ ಒಳಪಡುವ ಪ.ಜಾ/ಪ.ಪಂ. ಸಮುದಾಯದ ರೈತರು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಗಂಗಾಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯದ ರೈತರಿಗೆ ಇದು ಉತ್ತಮ ಅವಕಾಶವಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕ ಆಸಕ್ತ ರೈತರು ಗ್ರಾಮೀಣ ಉಪವಿಭಾಗದ ಮೆಸ್ಕಾಂ ಕಚೇರಿಯಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನವೆಂಬರ್ 15, 2025 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
ಆರ್‌ಟಿಸಿ (RTC)
ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಫೋಟೋ
ಬಿಪಿಎಲ್ ರೇಷನ್ ಕಾರ್ಡ್
ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್ ಪ್ರತಿ
ಬೋರವೆಲ್ ಇರುವ ಸ್ಥಳದಲ್ಲಿ ನಿಂತು ತೆಗೆದ ರೈತರ ಜಿಪಿಎಸ್ (GPS) ಫೋಟೋ
ಸಂಪರ್ಕ ಸಂಖ್ಯೆ (ಫೋನ್ ನಂಬರ್)
ಹೆಚ್ಚಿನ ಮಾಹಿತಿಗಾಗಿ ರೈತರು ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಜನೆಯ ಸದುಪಯೋಗವನ್ನು ಪ.ಜಾ/ಪ.ಪಂ. ಸಮುದಾಯದ ರೈತರು ಪಡೆದುಕೊಳ್ಳುವಂತೆ ಮೆಸ್ಕಾಂ ಮನವಿ ಮಾಡಿದೆ.

No comments:
Post a Comment