ಭಾನುವಾರದ ವಿಶೇಷ: ಕರೋನ ತಂದ ಕಷ್ಟ, ಸೀಜ್ ಆದ ಆಟೋ; ಅಪ್ಪನ ಬೆವರಿನ ಹನಿಗಳಿಗೆ ಬೆಲೆ ಕಟ್ಟಲಾಗದು – ಚಂದನ ಎನ್. - Kannada global

Breaking

Add

ಭಾನುವಾರ, ಏಪ್ರಿಲ್ 12, 2026

ಭಾನುವಾರದ ವಿಶೇಷ: ಕರೋನ ತಂದ ಕಷ್ಟ, ಸೀಜ್ ಆದ ಆಟೋ; ಅಪ್ಪನ ಬೆವರಿನ ಹನಿಗಳಿಗೆ ಬೆಲೆ ಕಟ್ಟಲಾಗದು – ಚಂದನ ಎನ್.

ನನ್ನ ಅಪ್ಪ ಸಾರಥಿ... 

ಅಪ್ಪ ಎಂದರೆ ಅಮ್ಮನಷ್ಟು ಸಲುಗೆ ಇಲ್ಲವಾದರೂ ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಅಚ್ಚುಮೆಚ್ಚು. ತನ್ನ ತಂದೆ ಮನೆಗೆ ಬಂದ ಕ್ಷಣದಿಂದಲೂ ಅವರೊಟ್ಟಿಗೆ ಕಳೆಯುವ ಕ್ಷಣಗಳು ಸ್ಮರಣೀವಾಗಿರುತ್ತವೆ. ಕೂಡು ಕುಟುಂಬವಿಲ್ಲವಾದರೂ ನಾವು ಇದುವರಿಗೂ ಮನೆಗಳು ಬೇರೆ ಯಾಗಿರಬಹುದು ಆದರೆ ಮನಸ್ಸುಗಳು ಯಾವತ್ತೂ ದೂರವಾಗದೆ ಒಟ್ಟಿಗೆ ಜೀವಿಸುತ್ತ  ಅನ್ಯೂನವಾಗಿದ್ದೇವೆ. ಕಷ್ಟ ಅಂತ ಬಂದಾಗ ಒಟ್ಟಾಗಿ ನಾವು ಇದೀವಿ ಎನ್ನುವ ಅಣ್ಣ -ತಮ್ಮಂದಿರ ಸಂಬಂಧ ಗಟ್ಟಿಯಾಗಿದೆ. ಇದು ನನಗೆ ವಿಶೇಷವಾದ ಒಲವು. ನಮ್ಮ ಕುಟುಂಬದ ಮೇಲೆ, ನನಗೆ ಅಪ್ಪಂದಿರ ಪ್ರೀತಿಯೇ ಹೆಚ್ಚಾಗಿ ದೊರೆತಿದೆ. ಅಂದರೆ ದೊಡ್ಡಪ್ಪನಲ್ಲಿ ಅಪ್ಪನ ಸ್ಥಾನ, ನನ್ನ ಚಿಕ್ಕಪ್ಪನಲ್ಲಿ ಅಪ್ಪನ ಸ್ಥಾನ ಇವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ಮಮತೆ, ಕಾಳಜಿಗೆ ನಾನೇ ಅದೃಷ್ಟವಂತೆ ಅಂತಲೂ  ಅನಿಸಿದ್ದು ಉಂಟು. ಇವರು ಇದುವರೆಗೂ ನನಗೆ ಸ್ವಂತ ಮಗಳಿಗಿಂತ ಹೆಚ್ಚಾಗಿ ಪ್ರೀತಿ ಕೊಟ್ಟಿದಾರೆ. 

ಕಷ್ಟಗಳು  ತನ್ನ ಮಕ್ಕಳಿಗೆ ಗೊತ್ತಾಗಬಾರದು ಎನ್ನುವ ತಂದೆ. ಆದರೆ ಅದೇ ಕಷ್ಟಗಳನ್ನು ಅನುಭವಿಸುತ್ತಿರುವ ತಂದೆಯನ್ನು ನೋಡಿ ಮಕ್ಕಳ ಜವಾಬ್ದಾರಿ ಯಾವಾಗ ಹೆಚ್ಚು ಆಗುತ್ತದೆಯೋ  ಆಗ ಮಕ್ಕಳು ತನ್ನ ತಂದೆಯ ಕಷ್ಟಕ್ಕೆ ಹೆಗಲಾಗುತ್ತಾರೆ. ನನ್ನ ತಂದೆಯು ಕೂಡ ಕಷ್ಟದಿಂದ ಕೂಡಿದ ಜೀವನದಲ್ಲೇ ಸಾಗಿ ಬಂದಿರುವುದು. ಮಕ್ಕಳಿಗಾಗಿ, ತನ್ನ ಮನೆಗಾಗಿ ಹಗಲು ರಾತ್ರಿಯೆನ್ನದೆ ದಿನವಿಡೀ ಆಟೋ ಓಡಿಸುತ್ತ ದಾರಿದೀಪವಾಗಿದ್ದಾರೆ. ಇದಕ್ಕೆ ಪ್ರತಿಫಲವಾಗಿ ನಾವು ಚನ್ನಾಗಿ ಓದಿ ನನ್ನ ಅಪ್ಪಾಜ್ಜಿಗೆ ಒಳ್ಳೆಯ ಮಗಳಾಗಿ ಅವರು ಪಟ್ಟ ಕಷ್ಟಕ್ಕೆ ನನ್ನ ಬೆಳವಣಿಗೆಯಿಂದಲೇ ನಾಂದಿಯಾಗಬೇಕು ಎಂಬುದು ನನ್ನ ಆಸೆ. ಇದನ್ನ ಆದಷ್ಟು ಬೇಗಾ ಈಡೇರಿಸುತ್ತೇನೆ ಅಪ್ಪಾಜಿ. 

ನಾನು ಅನಾರೋಗ್ಯದಿಂದ ಬಳಲಿದಾಗ ಅವರು ಪಟ್ಟ ಕಷ್ಟ ಹೇಳಲು ಅಸಾಧ್ಯ. ನಮ್ಮ ಅಪ್ಪಾಜಿ ಜೊತೆಗೆ ಹೆಗಲಾಗಿ ನಿಂತಿದ್ದು ನಮ್ಮ ದೊಡ್ಡಪ್ಪಾಜಿ. ಅವರನ್ನೂ ಅಪ್ಪಾಜಿ ಎಂದೇ ಕರೆಯುವುದು. ತುಂಬಾ ಕಷ್ಟಗಳಿಂದಾಗಿ ಒಟ್ಟಿಗೆ ಜೀವಿಸುವ ನನಗೆ ಅದೃಷ್ಟಗಳು ಕೈಗೆಟಕದೇ ದೂರ ಉಳಿಯುತ್ತವೆ ಎಂಬ ಭಯವು ಆಗಿದ್ದು ಉಂಟು. ಏಕೆಂದರೆ ಮನೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಯಿತು. ಇದಕ್ಕೆ ಮುಖ್ಯ ಕಾರಣವಾಗಿದ್ದು, 2019ರಲ್ಲಿ ಬಂದ ಕರೋನ ಎಂಬ ಭಯಾನಕ ರೋಗ ಇದರಿಂದ ಆಟೋ ಓಡಿಸಲು ಅಸಾಧ್ಯವಾಯಿತು. ಇದರಿಂದ ಆಟೋದ  ತಿಂಗಳ EMI ಕಟ್ಟೋದು ಕಷ್ಟವಾಯಿತು. ಆಟೋನು ಎಳೆದುಕೊಂಡು ಹೋದ್ರು. ಆಟೋವನ್ನು ಬಿಡಿಸಿಕೊಂಡು ಬರಲು 20 ಸಾವಿರ ಹಣವನ್ನು ಕಟ್ಟಿ  ಎಂದು ಬಿಲ್ ಮಾಡಿದರು. ಮಾರನೇ ದಿನ ಹೋಗಿ ನಾನು ಅಡಿಕೆ ಸುಲಿಯುವ ಮನೆಯಿಂದ 20 ಸಾವಿರ ಹಣವನ್ನು ತಂದು ಕೊಟ್ಟ ನಂತರದಲ್ಲಿ ಆಟೋ ಮನೆಗೆ ತಂದು ನಿಲ್ಲಿಸಿದರು. ಈ ರೀತಿಯಲ್ಲಿ ಒಂದಾದ ಮೇಲೊಂದು ಕಷ್ಟಗಳ್ಳನ್ನೇ ನೋಡುತ್ತಾ ಬಂದಾಗ ಇದರಿಂದ ಮುಕ್ತಿ ಯಾವಾಗ ದೊರೆಯುವುದು ಎಂಬಷ್ಟರ ಮಟ್ಟಿಗೆ ರೇಜಿಗೆ ಉಂಟಾಗುತ್ತಿತ್ತು. 

ಇಷ್ಟೆಲ್ಲ ಕಷ್ಟಗಳು ಇದ್ದರು ತನ್ನ ಕುಟುಂಬವನ್ನು ಮಕ್ಕಳ ಮೇಲೆ ಹೇರದೆ ತಾವೊಬ್ಬರೇ ನಿಭಾಯಿಸಿಕೊಂಡು ಬಂದರು. ಇವರ ಜೊತೆಗೆ ಅಮ್ಮನು ಹೆಗಲಾಗಿ ನಿಂತು ಒಟ್ಟಿಗೆ ನಿಭಾಯಿಸಿಕೊಂಡು ಹೋದ ಕಷ್ಟಗಳು ಕಣ್ಣು ಎದುರು ಕಟ್ಟಿದಂತಿದೆ. ಕಷ್ಟಗಳು ಸಾವಿರ ಇರಲಿ ಅಪ್ಪಾಜಿ, ನಿನ್ನ ಮಕ್ಕಳು ನಿನ್ನ ಕುಟುಂಬದವರು ನಾವು ನಿನ್ನೊಟ್ಟಿಗೆ ಇರುತ್ತೇವೆ. 

ನನ್ನ ಪ್ರೀತಿಯ ಅಪ್ಪಾಜಿ,
ದೊಡ್ಡಪಾಜಿ ಹಾಗೂ ನನ್ನ ಪ್ರೀತಿಯ ಚಿಕ್ಕಪ್ಪನಿಗೆ (ಆದರೂ ನೀನು ಇಲ್ಲ ಎನ್ನುವ ನೋವು ತಡೆಯಲಾರದ ಸಂಕಷ್ಟವಾಗಿದೆ.) 

ಅಪ್ಪಾಜಿ ಯಾವಾಗಲೂ ಖುಷಿಯಾಗಿರು.
ನಾವು ಜೀವಿಸುವವರೆಗೂ ನೀನು ಖುಷಿಯಾಗಿ ನೂರು ಕಾಲ ಸುಖವಾಗಿ ಬಾಳಬೇಕೆಂದು ಈ ನಿನ್ನ ಮಗಳ ಆಸೆ.

- ಚಂದನ ಎನ್.
MA ವಿದ್ಯಾರ್ಥಿನಿ, ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ, ಶಿವಮೊಗ್ಗ:

ಸಂಪಾದಕೀಯ ನುಡಿ

ಬದುಕು ಅಂದುಕೊಂಡಷ್ಟು ಸರಳವಲ್ಲ, ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಸಾರಥಿಯಾಗಿ ಸಂಸಾರ ನೌಕೆಯನ್ನು ಮುನ್ನಡೆಸುವುದು ಅಗ್ನಿಪರೀಕ್ಷೆಯೇ ಸರಿ. ಅಪ್ಪ ಎಂದರೆ ಮನೆಯ ಆಧಾರಸ್ತಂಭ; ಹೊರಗಿನ ಬಿಸಿಲು, ಮಳೆ, ಕಷ್ಟಗಳನ್ನೆಲ್ಲ ತಾನುಂಡು ತನ್ನ ಮಕ್ಕಳಿಗೆ ನೆರಳು ನೀಡುವ ಮಹಾವೃಕ್ಷ.

ಇಂದಿನ 'ಭಾನುವಾರದ ವಿಶೇಷ'ದಲ್ಲಿ ಚಂದನ ಎನ್. ಅವರು ತಮ್ಮ ತಂದೆಯ ಜೀವನದ ಹೋರಾಟದ ಪುಟಗಳನ್ನು ತೆರೆದಿಟ್ಟಿದ್ದಾರೆ. ಆಟೋ ರಿಕ್ಷಾದ ಚಕ್ರಗಳ ಸದ್ದಿನ ನಡುವೆ ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸಿದ ಒಬ್ಬ ತಂದೆಯ ತ್ಯಾಗ, ಕರೋನದಂತಹ ಕಷ್ಟದ ಕಾಲದಲ್ಲಿ ಕುಟುಂಬವು ಒಂದಾಗಿ ನಿಂತ ರೀತಿ ಮತ್ತು ಕಷ್ಟಗಳ ನಡುವೆಯೂ ಅರಳಿದ ಅನ್ಯೂನ ಸಂಬಂಧದ ಕಥೆ ಇಲ್ಲಿದೆ. ಇದು ಕೇವಲ ಒಬ್ಬ ತಂದೆಯ ಕಥೆಯಲ್ಲ, ಮಗಳೊಬ್ಬಳು ತನ್ನ ತಂದೆಯ ಬೆವರಿನ ಹನಿಗೆ ಅರ್ಪಿಸಿದ ಭಾವಪೂರ್ಣ ಕೃತಜ್ಞತೆ.

ಅಪ್ಪನ ಮೇಲಿನ ಅಪಾರ ಪ್ರೀತಿ ಮತ್ತು ಗೌರವದ ಈ ಲೇಖನ ನಿಮಗಾಗಿ...

— ಚರಣ್ ರಾಜ್

ಸಂಪಾದಕರು, ಕನ್ನಡ ಗ್ಲೋಬಲ್



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್