ರಿಪ್ಪನ್‌ಪೇಟೆಯಲ್ಲಿ ವರುಣನ ಅಬ್ಬರ: ತೆಂಗಿನಮರ ಉರುಳಿ ವಾಹನ ಜಖಂ, ಹಲವೆಡೆ ಹಾನಿ - Kannada global

Breaking

Monday, March 23, 2026

ರಿಪ್ಪನ್‌ಪೇಟೆಯಲ್ಲಿ ವರುಣನ ಅಬ್ಬರ: ತೆಂಗಿನಮರ ಉರುಳಿ ವಾಹನ ಜಖಂ, ಹಲವೆಡೆ ಹಾನಿ

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಇಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸುರಿದ ಭಾರಿ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿದೆ.


ಟಾಟಾ ಏಸ್ ವಾಹನದ ಮೇಲೆ ಬಿದ್ದ ತೆಂಗಿನಮರ

ಪಟ್ಟಣದ ಶಬರೀಶನಗರದ ನಿವಾಸಿ ಗುಂಡಣ್ಣ (ಗಂಗಾಧರ್) ಎಂಬುವವರಿಗೆ ಸೇರಿದ ಟಾಟಾ ಏಸ್ ಲಗೇಜ್ ವಾಹನವು ಮಳೆಗೆ ಬಲಿಯಾಗಿದೆ. ಮನೆಯ ಸಮೀಪ ನಿಲ್ಲಿಸಲಾಗಿದ್ದ ಈ ವಾಹನದ ಮೇಲೆ ಗಾಳಿಯ ತೀವ್ರತೆಗೆ ಸಮೀಪದ ತೆಂಗಿನಮರವು ಬೇರು ಸಮೇತ ಕಿತ್ತು ಬಿದ್ದಿದೆ. ಇದರ ಪರಿಣಾಮವಾಗಿ ವಾಹನದ ಮೇಲ್ಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಘಟನೆಯ ವೇಳೆ ವಾಹನದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ.

ಮನೆಯ ಮೇಲ್ಛಾವಣಿಗೆ ಹಾನಿ

ತೀರ್ಥಹಳ್ಳಿ ರಸ್ತೆಯಲ್ಲಿರುವ ವಯೋವೃದ್ಧೆ ವನಜಾಕ್ಷಿ ಎಂಬುವವರ ಮನೆಯ ಬಳಿಯಿದ್ದ ಹಲಸಿನ ಮರದ ದೊಡ್ಡ ಕೊಂಬೆಯೊಂದು ಮುರಿದು ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿ ಹಾನಿಗೊಳಗಾಗಿದ್ದು, ಮನೆಯ ಒಳಗೂ ಅಲ್ಪಪ್ರಮಾಣದ ನಷ್ಟ ಸಂಭವಿಸಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮರ ಬಿದ್ದ ಆಘಾತದಿಂದ ಆತಂಕಕ್ಕೆ ಒಳಗಾಗಿದ್ದಾರೆ.

ವಿದ್ಯುತ್ ವ್ಯತ್ಯಯ - ಸಾರ್ವಜನಿಕರ ಆತಂಕ

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಮಳೆಗೆ ಪಟ್ಟಣದ ಹಲವು ಕಡೆ ಮರಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ಕಂಬಗಳು ಜಖಂಗೊಂಡಿದ್ದು, ಪಟ್ಟಣದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಪೊಲೀಸ್ ಭೇಟಿ ಮತ್ತು ತೆರವು ಕಾರ್ಯಾಚರಣೆ

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಿ.ಎಸ್.ಐ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಚುರುಕಾಗಿ ನಡೆಯಿತು.

ಎಚ್ಚರಿಕೆ: ಮಳೆಗಾಲದ ಮುನ್ಸೂಚನೆ ಹಾಗೂ ಬಿರುಗಾಳಿಯ ಹಿನ್ನೆಲೆಯಲ್ಲಿ ಹಳೆಯ ಮರಗಳ ಬಳಿ ಇರುವವರು ಮತ್ತು ಸಂಚರಿಸುವ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ವರದಿ: ಕನ್ನಡ ಗ್ಲೋಬಲ್ ನ್ಯೂಸ್, ರಿಪ್ಪನ್‌ಪೇಟೆ.


ಕನ್ನಡ ಗ್ಲೋಬಲ್ ಯೂಟ್ಯೂಬ್ ಚಾನೆಲ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಗ್ಲೋಬಲ್ ವಾಟ್ಸಾಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ - 9110857339

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್