ಶಿವಮೊಗ್ಗ: ನಗರದ ಉಷಾ ಸಾಹಿತ್ಯ ಮಾಲೆ (ಮೈಸೂರು ಹಾಗೂ ಶಿವಮೊಗ್ಗ) ಮತ್ತು ಇಂದಿರಾ ಪ್ರಕಾಶ ಅಕಾಡೆಮಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8ರಂದು ಮಧ್ಯಾಹ್ನ 3.30ಕ್ಕೆ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ವಿನೋಬ ನಗರದ ಇಂದಿರಾ ಪ್ರಕಾಶ ಅಕಾಡೆಮಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ ವೀರ ವನಿತೆಯರ ಕುರಿತು ಸಾಹಿತ್ಯಿಕ ಚಿಂತನೆ ನಡೆಯಲಿದೆ. ಬ್ರಿಟಿಷರ ಹಾಗೂ ಮೊಘಲರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ವಿಶಿಷ್ಟ ಸಾಧಕ ಮಹಿಳೆಯರ ಜೀವನ ಹಾಗೂ ಹೋರಾಟದ ಕುರಿತು ಕವನಗಳನ್ನು ವಾಚಿಸಲು ಕವಿ ಮತ್ತು ಕವಯತ್ರಿಯರಿಗೆ ಆಹ್ವಾನ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಾಹಿತಿ ಎಚ್.ಎಸ್. ರುದ್ರೇಶ್ ಅವರು, "ಇತಿಹಾಸದ ಪುಟಗಳಲ್ಲಿ ಅಪ್ರತಿಮ ಶೌರ್ಯ ಮೆರೆದ ಭಾರತೀಯ ನಾರಿಯರ ಸ್ಮರಣೆ ಮಾಡುವ ಉದ್ದೇಶದಿಂದ ಈ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕವಿಗಳು ಮಾರ್ಚ್ 3ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಆಸಕ್ತರು ಮೊಬೈಲ್ ಸಂಖ್ಯೆ: 94485 28641 ಅನ್ನು ಸಂಪರ್ಕಿಸಬಹುದಾಗಿದೆ
ಕನ್ನಡ ಗ್ಲೋಬಲ್ youtube channel ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ whatsapp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ - 91108 57339

No comments:
Post a Comment